ನಾನು ಸೆರೆಯವರ ಜೊತೆ ಕೆಬಾರ್ ನದಿಯ ಬಳಿಯಲ್ಲಿರುವಾಗ ಮೂವತ್ತ ನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆದದ್ದೇನಂದರೆ, ಆಕಾಶಗಳು ತೆರೆಯಲ್ಪ ಟ್ಟವು; ನಾನು ದೇವರ ದರ್ಶನಗಳನ್ನು ಕಂಡೆನು.
ನಾನು ನೋಡಲಾಗಿ ಇಗೋ, ಉತ್ತರದಿಂದ ಸುಳಿಗಾಳಿ ಬಂದಿತು. ಒಂದು ಮಹಾ ಮೇಘವೂ ಝಗಝಗಿಸುವ ಬೆಂಕಿಯೂ ಅದರ ಸುತ್ತಲು ಪ್ರಕಾಶವೂ ಇತ್ತು; ಬೆಂಕಿಯ ಮಧ್ಯದಲ್ಲಿ ಥಳಥಳಿಸುವಂಥದ್ದು ಹೊಂಬಣ್ಣದ ಹಾಗಿತ್ತು.
ಅವು ಗಳ ಮುಖಗಳ ರೂಪದ ಪ್ರಕಾರ ಅವು ನಾಲ್ಕು ಜೀವಿಗಳು ಮನುಷ್ಯನ ರೂಪದ ಮುಖವನ್ನು ಹೊಂದಿದ್ದವು; ಬಲಗಡೆಯಲ್ಲಿ ಸಿಂಹದ ಮುಖವೂ ಎಡಗಡೆ ಯಲ್ಲಿ ಎತ್ತಿನ ಮುಖವೂ ಆ ನಾಲ್ಕಕ್ಕೆ ಹದ್ದಿನ ಮುಖವೂ ಇತ್ತು.
ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು.
ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಅವುಗಳು ಹೋದವು; ಆ ಸ್ಥಳಕ್ಕೆ ಅವುಗಳ ಆತ್ಮವು ಹೋಗಬೇಕೆಂದಿತ್ತು; ಚಕ್ರಗಳು ಸಹ ಅವುಗಳಿಗೆದು ರಾಗಿ ಮೇಲಕ್ಕೆ ಎತ್ತಲ್ಪ ಟ್ಟವು; ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು.
ಅವುಗಳು ಹೋಗುವಾಗ ಇವುಗಳೂ ಹೋದವು; ಅವುಗಳು ನಿಲ್ಲುವಾಗ ಇವುಗಳೂ ನಿಂತವು; ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಅವುಗಳ ಸಂಗಡ ಎತ್ತಲ್ಪಟ್ಟವು; ಆ ಜೀವಿಯ ಆತ್ಮನು ಆ ಚಕ್ರಗಳಲ್ಲಿ ಇತ್ತು.
ಆ ಗಗನಮಂಡಲದ (ರೂಪದ) ಕೆಳಗೆ ಅವುಗಳ ರೆಕ್ಕೆಗಳು ನೆಟ್ಟಗೆ (ನೇರ ವಾಗಿ) ಒಂದಕ್ಕೊಂದು ಸರಿಯಾಗಿದ್ದವು; ಅವುಗಳ ಶರೀರಗಳನ್ನು ಮುಚ್ಚಿಕೊಳ್ಳುವ ಎರಡೆರೆಡು ರೆಕ್ಕೆಗಳು ಎರಡು ಕಡೆಗಳಲ್ಲೂ ಇರುವ ಪ್ರತಿಯೊಂದನ್ನು ಮುಚ್ಚಿ ಕೊಂಡಿದ್ದವು.
ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.
ಆತನ ನಡುವು ಕಾಣಿಸುವಂತೆ ಮೇಲೆಯೂ ಒಳಗೂ ಸುತ್ತಲೂ ಬೆಂಕಿಯಂತೆ ಇರುವ ಸುಂದರವಾದ ಒಂದು ಬಣ್ಣದ ರೂಪವು ಇರುವದನ್ನು ನಾನು ನೋಡಿದೆನು; ಆತನ ನಡುವು ಕಾಣಿಸುವಂತೆ ಕೆಳಗೆ ಬೆಂಕಿಯ ಹಾಗೆ ಅದರ ಸುತ್ತಲೂ ಪ್ರಕಾಶವಿರುವದನ್ನು ನೋಡಿದೆನು.
ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.